ಪರಾವಲಂಬಿ ಜೀವಿಶಾಸ್ತ್ರ(ಪ್ಯಾರಸೈಟಾಲಜಿ) ಎಂದರೆ ಪರಾವಲಂಬಿ ಜೀವಿಗಳ ಕುರಿತು, ಅವುಗಳು ಅವಲಂಬಿಸುವ ಪೋಷಕ ಜೀವಿಗಳು ಹಾಗೂ ಅವುಗಳ ನಡುವೆ ಇರುವಂಥ ಸಂಬಂಧದ ಕುರಿತಾಗಿರುವ ಅಧ್ಯಯನ. == ಪರಾವಲಂಬಿ ಜೀವಿ == ಪರಾವಲಂಬಿ ಜೀವಿ ಎಂದರೆ ಬೇರಂದು ಜೀವಿಯ(ಪೋಷಕ ಜೀವಿ) ಮೇಲೆ ತಾತ್ಕಾಲಿಕವಾಗಿ ಅಥವಾ ಶಾಶ್ವತವಾಗಿ ವಾಸಿಸುವ ಜೀವಿಯಾಗಿದೆ. ಇವುಗಳು ದೈಹಿಕವಾಗಿ ಅಥವಾ ಶಾರೀರಿಕವಾಗಿ ಅತಿಥಿ ಜೀವಿಗಳ ಮೇಲೆ ಅವಲಂಬಿತವಾಗಿರುತ್ತವೆ. == ಪರಾವಲಂಬಿ ಜೀವಿಗಳ ಸ್ವರೂಪ == ಏಕಕೋಶೀಯ ಜೀವಿ, ಹುಳಗಳು, ಸಂಧಿಪದಿಗಳು- ಇವುಗಳು ಪರಾವಲಂಬಿ ಜೀವಿಗಳು == ವೈದ್ಯಕೀಯ ಪ್ಯಾರಸೈಟಾಲಜಿ == ವೈದ್ಯಕೀಯ ಪ್ಯಾರಸೈಟಾಲಜಿ ಎಂದರೆ ಮನುಷ್ಯರ ಮೇಲೆ ರೋಗ ಉಂಟುಮಾಡುವ ಪರಾವಲಂಬಿಗಳ ಕುರಿತಾಗಿರುವ ಅಧ್ಯಯನ. == ಪರಾವಲಂಬಿ ಜೀವಿಗಳ ಹಾಗೂ ಅತಿಥಿ ಜೀವಿಗಳ ನಡುವಿನ ಸಂಬಂಧದ ರೀತಿಗಳು == === ಮ್ಯುಚುವಲಿಸಂ === ಪರಸ್ಪರ ಲಾಭ ದೊರೆಯುವಂಥ ಸಂಬಂಧವು ಪರಾವಲಂಬಿ ಜೀವಿ ಹಾಗೂ ಪೋಷಕ ಜೀವಿಯ ನಡುವೆ ಇರುತ್ತದೆ. === ಸಹಜೀವನ (ಸಿಂಬಯೋಸಿಸ್) === ಪರಾವಲಂಬಿ ಜೀವಿ ಹಾಗೂ ಪೋಷಕ ಜೀವಿಯ ನಡುವೆ ಶಾಶ್ವತ ಸಂಬಂಧ ಇರುತ್ತದೆ. ಇವುಗಳು ಪರಸ್ಪರ ಅವಲಂಬಿತವಾಗಿರುವ ಕಾರಣ ಒಬ್ಬರನ್ನು ಬಿಟ್ಟು ಇನ್ನೊಬ್ಬರು ಬದುಕಲು ಸಾಧ್ಯವಿರುವುದಿಲ್ಲ. === ಸಹಜೀವಿತ್ವ (ಕಮೆಂಸಾಲಿಸಮ್) === ಪರಾವಲಂಬಿ ಜೀವಿಗೆ ಪೋಷಕ ಜೀವಿಯಿಂದ ಲಾಭ ಸಿಗುತ್ತದೆ. ಆದರೆ ಪೋಷಕ ಜೀವಿಗೆ ಪರಾವಲಂಬಿ ಜೀವಿಯಿಂದ ಲಾಭ ಅಥವಾ ಹಾನಿ ಇರುವುದಿಲ್ಲ. === ಪರಾವಲಂಬಿಕೆ (ಪ್ಯಾರಸೈಟಿಸಮ್) === ಒಂದು ಜೀವಿಯು ಇನ್ನೊಂದು ಜೀವಿಯ ವೆಚ್ಚದಲ್ಲಿ ವಾಸಿಸುತ್ತದೆ. ನಂತರ ಆ ಇನ್ನೊಂದು ಜೀವಿವು ಈ ಸಂಬಂಧದಿಂದಾಗಿ ನರಳುತ್ತದೆ. ಅಂದರೆ ಅದು ನಷ್ಟವನ್ನು ಅನುಭವಿಸುತ್ತದೆ. == ಪರಾವಲಂಬಿ ಜೀವಿಗಳ ವರ್ಗೀಕರಣ == === ವಾಸಸ್ಥಾನದ ಆಧಾರದ ಮೇಲೆ ವರ್ಗೀಕರಣ === ಎಕ್ಟೋಪ್ಯಾರಸೈಟ್ಸ್ ಇವುಗಳು ಪೋಷಕ ಜೀವಿಯ ಚರ್ಮದ ಮೇಲೆ ವಾಸಿಸುವ ಅಥವಾ ಮೇಲ್ಮೈನಲ್ಲಿರುವ ಜೀವಕೋಶದ ಮೇಲೆ ಪರಿಣಾಮ ತೋರಿಸುವಂತಹ ಪರಾವಲಂಬಿ ಜೀವಿಗಳು. ಉದಾಹರಣೆ: ಹೇನುಗಳು ಎಂಡೋಪ್ಯಾರಸೈಟ್ಸ್ ಇವುಗಳು ಪೋಷಕ ಜೀವಿಯ ದೇಹದ ಒಳಗೆ ವಾಸಿಸುವಂಥ ಪರಾವಲಂಬಿ ಜೀವಿಗಳು. === ಪೋಷಕ ಜೀವಿಯ ಮೇಲೆ ಅವಲಂಬಿವಾಗಿರುವ ಆಧಾರದ ಮೇಲೆ ವರ್ಗೀಕರಣ === ತಾತ್ಕಾಲಿಕ (ಐಚ್ಚಿಕ) ಪರಾವಲಂಬಿಗಳು (ಟೆಂಪೊರರಿ ಪ್ಯಾರಸೈಟ್ಸ್) ಪರಾವಲಂಬಿ ಜೀವನದ ಜೊತೆಗೆ ಸ್ವತಂತ್ರ ಅಸ್ತಿತ್ವವನ್ನು ಹೊಂದಿರುವಂಥ ಸಾಮರ್ಥ್ಯ ಇರುವ ಪರಾವಲಂಬಿ ಜೀವಿಗಳು. ಶಾಶ್ವತ (ನಿರ್ಬಂಧಕ) ಪರಾವಲಂಬಿಗಳು (ಪರ್ಮನೆಂಟ್ ಪ್ಯಾರಸೈಟ್ಸ್) ಪರಾವಲಂಬಿ ಜೀವಿಯು ಸಂಪೂರ್ಣವಾಗಿ ತನ್ನ ಚಯಾಪಚಯ ಕ್ರಿಯೆಗಾಗಿ , ಆಶ್ರಯಕ್ಕಾಗಿ, ಮತ್ತು ಸಾರಿಗೆ ವ್ಯವಸ್ಥೆಗಾಗಿ ಪೋಷಕ ಜೀವಿಯ ಮೇಲೆ ಅವಲಂಬಿತವಾಗಿದೆ. ಪರಾವಲಂಬಿ ಜೀವಿಯು ಪೋಷಕ ಜೀವಿಯ ದೇಹದ ಹೊರಗೆ ಬದುಕಲು ಸಾಧ್ಯವಿಲ್ಲ. ಉದಾ: ಪ್ಲಾಸ್ಮೋಡಿಯಂಜಾತಿಯ ಸೂಕ್ಷ್ಮ ಜೀವಿಗಳು. === ತಮ್ಮ ರೋಗಕಾರಕತೆಯ ಆಧಾರದ ಮೇಲೆ ವರ್ಗೀಕರಣ === ರೋಗಕಾರಕ ಪರಾವಲಂಬಿಗಳು (ಪ್ಯಾತೋಜನಿಕ್ ಪ್ಯಾರಸೈಟ್ಸ್) ಇವು ಪೋಷಕ ಜೀವಿಗೆ ಕಾಯಿಲೆಯನ್ನು ಉಂಟುಮಾಡುತ್ತವೆ. ಉದಾಹರಣೆ: ಎಂಟಮೀಬ ಹಿಸ್ಟೋಲಿಟಿಕ ರೋಗಕಾರಕವಲ್ಲದ (ಸಹಜೀವಿ) ಪರಾವಲಂಬಿಗಳು (ನಾನ್-ಪ್ಯಾತೋಜನಿಕ್ ಪ್ಯಾರಸೈಟ್ಸ್) ಪರಾವಲಂಬಿ ಜೀವಿಯು ಪೋಷಕ ಜೀವಿಗೆ ಯಾವುದೇ ಹಾನಿ ಮಾಡದೆ ಪೋಷಕ ಜೀವಿಯಿಂದ ಆಹಾರ ಮತ್ತು ರಕ್ಷಣೆ ಪಡೆಯುತ್ತದೆ. ಉದಾಹರಣೆ: ಎಸ್ಚಿರೀಶಿಯಾ ಕೊಲೈ ಅವಕಾಶವಾದಿ ಪರಾವಲಂಬಿಗಳು (ಒಪರ್ಚುನಿಸ್ಟಿಕ್ ಪ್ಯಾರಸೈಟ್ಸ್) ಇಂತಹ ಪರಾವಲಂಬಿ ಜೀವಿಗಳು ಆರೋಗ್ಯವಂತ ನಿರೋಧಕ ಶಕ್ತಿಯುಳ್ಳ ವ್ಯಕ್ತಿಗಳಲ್ಲಿ ತೀವ್ರ ಕಾಯಿಲೆ/ಬೇನೆ ಉಂಟುಮಾಡದೆ, ನಿರೋಧಕ ಶಕ್ತಿ ಕೊರತೆಯುಳ್ಳ ವ್ಯಕ್ತಿಗಳಲ್ಲಿ ತೀವ್ರ ಕಾಯಿಲೆ ಉಂಟುಮಾಡುತ್ತವೆ. ಉದಾಹರಣೆ: ನ್ಯುಮೋನಿಯಾ ಕಾರ್ನೀ == ಉಲ್ಲೇಖ ==